ಒಬ್ಬ ಸ್ನೇಹಿತನೊಂದಿಗೆ ಆದ ಸಂವಾದ ಇದು
ನೀನ್ಯಾಕೆ ಅವ್ನ ಹತ್ರ ಮಾತು ಬಿಟ್ಟಿರೋದು ? ಅವ್ನೂ ನೀನೂ ಒಳ್ಳೆ ಫ್ರೆಂಡ್ಸ್ ಅಲ್ವಾ !
ಕೆಟ್ಟ ಫ್ರೆಂಡ್ಸ್ ಅಂತ ಬೇರೆ ಇರ್ತಾರ !? ಅವನ ಮರು ಪ್ರಶ್ನೆ
ಹೂಂ ಇರ್ತಾರೋ ! ಹಣ್ಣುಗಳ ತರಹ ...ಒಳ್ಳೆ ಹಣ್ಣು , ಕೆಟ್ಟ ಹಣ್ಣು, ಕೊಳೆತ ಹಣ್ಣು ...
ಕೊಳೆತ ಹಣ್ಣನ್ನ ಕಸ ಅಂತ ಕಸದ ಬುಟ್ಟಿಗೆ ಹಾಕಬೇಕು; ಅದನ್ನ ಕಸ ಅಂತಾರೆ ಹೊರತು ಹಣ್ಣು ಅನ್ನೋಲ್ಲ
ನಿಜವೇನೋ ! ವಾದಕ್ಕೆ ಅಂತ ನಾ ಬಳಸಿದ ಉಪಮೆಗೆ ತಕ್ಕ ಉತ್ತರ ಅದು ! ಆದರೂ ಅಷ್ಟು ತಾರ್ಕಿಕವಾಗಿ ಯೋಚಿಸೋಕೆ ಮನುಷ್ಯ ಮಾತ್ರನಿಂದ ಸಾಧ್ಯವೇ?
ನಾವು ಇಷ್ಟ ಪಟ್ಟವ್ರನ್ನ ಕಳ್ಕೊತ ಆಗೋ ಬೇಜಾರಿನ ತೀವ್ರತೆ ಹಾಳಾಗಿರೊ ಹಣ್ಣನ್ನ ಕಸದ ಬುಟ್ಟಿಗೆ ಹಾಕೋವಾಗ ಇರುತ್ತಾ !
No comments:
Post a Comment